Monday, June 18, 2007

ಕೇರಳದ ಮಲೆನಾಡಿನಲ್ಲಿ ಒಂದು ದಿನ ...ಯಾಂತ್ರಿಕ ಬದುಕಿಗೊಂದು ಪುಟ್ಟ ವಿರಾಮ...



ಸ್ಠಳದ ವಿವರಣೆಗಿಂತ .. ನನಗಾದ ಅನುಭವ ಬರೆಯೋಣ ಅನ್ನಿಸ್ತಿದೆ...ಪ್ರತಿ ದಿನದ ಒಂದೇ ರ್‍ಈತಿಯ ದಿನಚರಿಗೆ.."ರಿಫೆಶ್ಮೆಂಟ್" ಆಗಿ ಅನಿಸಿದ್ದು.. "ವೈನಾಡಿನ" ಪ್ರಯಾಣ.ಪ್ರಕೃತಿಯ ಬೆಟ್ಟ ಗುಡ್ಡಗಳ ನಡುವೆ ... ಸುತ್ತಲಿನ ಸೌಂದರ್ಯ ಆಸ್ವಾದಿಸುತ್ತ... "ಎಡಕಲ್ಲು ಗುಡ್ಡದ" ತುದಿವರೆಗೆ ..ಕಾಲ್ನಡಿಗೆಯಲ್ಲಿ ಸಾಗಿದ್ದು .. ಮನಸ್ಸಿಗೆ ಮುದ ನೀಡುವ ಒಂದು ಉತ್ತಮ ಸಾಹಸ ಯೆನಿಸಿತ್ತು.ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನನಗೆ... ಬಾಲ್ಯವನ್ನು ನೆನಪಿಸಿತ್ತು...೩೦೦ ಮೀಟರ್ ಗಿಂತ ಎತ್ತರವಾದ ,ಕಡಿದಾದ ಕಲ್ಲಿನ ಬೆಟ್ಟ ಹತ್ತುವಾಗ ...ಮೈ ರೋಮಾಂಚನ ಗೊಂಡಿತ್ತು. ಸುತ್ತಲಿನ ವಿಹಂಗಮ ನೋಟ ಅದಮ್ಯ ಉತ್ಸಾಹ ಮೂಡಿಸಿತ್ತು.ಒಂದೇ ಸಮನೆ ಬೀಸುತ್ತಿದ್ದ.. ತಣ್ಣನೆ ಗಾಳಿ... ಕಣ್ಣಿನ ಉದ್ದಗಲಕ್ಕೂ ಆವರಿಸಿದ.. ಹಸಿರು..,ಇಬ್ಬನಿ ಮೋಡಗಳ ಮೇಲೆ ತೇಲಿದ ಅನುಭವ.. ಮನಸ್ಸಿಗೆ ಹಿತ ನೀಡುತ್ತಿತ್ತು.ಪ್ರಕೃತಿ ಅವರ್ಣನೀಯ ಸುಂದರತೆ, ಜೊತೆಗಾರರ ಸಹಕಾರ, ಸಮಯೋಚಿತ ಹಾಸ್ಯ ಚಟಾಕಿಗಳು.. ದೇಹಕ್ಕಾದ ಆಯಾಸವನ್ನು ಕಡಿಮೆ ಗೊಳಿಸಿತ್ತು.ಯಾರಿಗೂ ಮರಳುವ ಬಯಕೆಯೇ ಇಲ್ಲ... ಆದರೆ ... ಸಮಯ ಸರಿಯುತ್ತಿತ್ತು.. ನಮಗೆ ಬೇರೆ ದಾರಿ ಇರಲಿಲ್ಲ.. "ಎಡಕಲ್ಲು ಗುಡ್ಡದ ಮೇಲೆ" ಹಳೇ ಕನ್ನಡ ಚಿತ್ರವನ್ನು ಮೆಲುಕು ಹಾಕುತ್ತ..ಪ್ರಕ್ರುತಿ ಸಹಜವಾದ ಸುಮಾರು ೩೦೦೦೦ ವರ್ಷ್ ಹಳೆಯ .. ಗವಿಯನ್ನು ವೀಕ್ಷಿಸಿ.. ಮತ್ತೆರಡು ಸ್ಥಳ ನೋಡಲೆಂದು ಅವಸರವಾಗಿ ಬೆಟ್ಟ ಇಳಿದರೂ.... ಏನೋ ಒಂದು ಸುಂದರ ಅನುಭವ ಎಲ್ಲರ ಮನಸ್ಸಿನಲ್ಲಿತ್ತು. "ಸೂಚಿಪ್ಪರ" ಜಲಪಾತ ಮತ್ತು ಪೊಕಟ್ ಲೇಕ್ ಗೆ ಹೋದಾಗ ಮಳೆ ಇದ್ದರೂ.. ನಮ್ಮ ಪ್ರಯಾಣ ಅಪೂರ್ಣ ಅನಿಸಲಿಲ್ಲ....ಮರಳುವಾಗ .... ಯಾಂತ್ರಿಕ ಬದುಕಿನ ಬವಣೆಗಳಿಂದ ಮುಕ್ತವಾಗಿ ಸಾರ್ಥಕವಾಗಿ ಕಳೆದ ಒಂದು ದಿನ ... ಎನ್ನುವ ಭಾವನೆ ಇತ್ತು.....

just chill..