Monday, June 18, 2007

ಕೇರಳದ ಮಲೆನಾಡಿನಲ್ಲಿ ಒಂದು ದಿನ ...ಯಾಂತ್ರಿಕ ಬದುಕಿಗೊಂದು ಪುಟ್ಟ ವಿರಾಮ...



ಸ್ಠಳದ ವಿವರಣೆಗಿಂತ .. ನನಗಾದ ಅನುಭವ ಬರೆಯೋಣ ಅನ್ನಿಸ್ತಿದೆ...ಪ್ರತಿ ದಿನದ ಒಂದೇ ರ್‍ಈತಿಯ ದಿನಚರಿಗೆ.."ರಿಫೆಶ್ಮೆಂಟ್" ಆಗಿ ಅನಿಸಿದ್ದು.. "ವೈನಾಡಿನ" ಪ್ರಯಾಣ.ಪ್ರಕೃತಿಯ ಬೆಟ್ಟ ಗುಡ್ಡಗಳ ನಡುವೆ ... ಸುತ್ತಲಿನ ಸೌಂದರ್ಯ ಆಸ್ವಾದಿಸುತ್ತ... "ಎಡಕಲ್ಲು ಗುಡ್ಡದ" ತುದಿವರೆಗೆ ..ಕಾಲ್ನಡಿಗೆಯಲ್ಲಿ ಸಾಗಿದ್ದು .. ಮನಸ್ಸಿಗೆ ಮುದ ನೀಡುವ ಒಂದು ಉತ್ತಮ ಸಾಹಸ ಯೆನಿಸಿತ್ತು.ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನನಗೆ... ಬಾಲ್ಯವನ್ನು ನೆನಪಿಸಿತ್ತು...೩೦೦ ಮೀಟರ್ ಗಿಂತ ಎತ್ತರವಾದ ,ಕಡಿದಾದ ಕಲ್ಲಿನ ಬೆಟ್ಟ ಹತ್ತುವಾಗ ...ಮೈ ರೋಮಾಂಚನ ಗೊಂಡಿತ್ತು. ಸುತ್ತಲಿನ ವಿಹಂಗಮ ನೋಟ ಅದಮ್ಯ ಉತ್ಸಾಹ ಮೂಡಿಸಿತ್ತು.ಒಂದೇ ಸಮನೆ ಬೀಸುತ್ತಿದ್ದ.. ತಣ್ಣನೆ ಗಾಳಿ... ಕಣ್ಣಿನ ಉದ್ದಗಲಕ್ಕೂ ಆವರಿಸಿದ.. ಹಸಿರು..,ಇಬ್ಬನಿ ಮೋಡಗಳ ಮೇಲೆ ತೇಲಿದ ಅನುಭವ.. ಮನಸ್ಸಿಗೆ ಹಿತ ನೀಡುತ್ತಿತ್ತು.ಪ್ರಕೃತಿ ಅವರ್ಣನೀಯ ಸುಂದರತೆ, ಜೊತೆಗಾರರ ಸಹಕಾರ, ಸಮಯೋಚಿತ ಹಾಸ್ಯ ಚಟಾಕಿಗಳು.. ದೇಹಕ್ಕಾದ ಆಯಾಸವನ್ನು ಕಡಿಮೆ ಗೊಳಿಸಿತ್ತು.ಯಾರಿಗೂ ಮರಳುವ ಬಯಕೆಯೇ ಇಲ್ಲ... ಆದರೆ ... ಸಮಯ ಸರಿಯುತ್ತಿತ್ತು.. ನಮಗೆ ಬೇರೆ ದಾರಿ ಇರಲಿಲ್ಲ.. "ಎಡಕಲ್ಲು ಗುಡ್ಡದ ಮೇಲೆ" ಹಳೇ ಕನ್ನಡ ಚಿತ್ರವನ್ನು ಮೆಲುಕು ಹಾಕುತ್ತ..ಪ್ರಕ್ರುತಿ ಸಹಜವಾದ ಸುಮಾರು ೩೦೦೦೦ ವರ್ಷ್ ಹಳೆಯ .. ಗವಿಯನ್ನು ವೀಕ್ಷಿಸಿ.. ಮತ್ತೆರಡು ಸ್ಥಳ ನೋಡಲೆಂದು ಅವಸರವಾಗಿ ಬೆಟ್ಟ ಇಳಿದರೂ.... ಏನೋ ಒಂದು ಸುಂದರ ಅನುಭವ ಎಲ್ಲರ ಮನಸ್ಸಿನಲ್ಲಿತ್ತು. "ಸೂಚಿಪ್ಪರ" ಜಲಪಾತ ಮತ್ತು ಪೊಕಟ್ ಲೇಕ್ ಗೆ ಹೋದಾಗ ಮಳೆ ಇದ್ದರೂ.. ನಮ್ಮ ಪ್ರಯಾಣ ಅಪೂರ್ಣ ಅನಿಸಲಿಲ್ಲ....ಮರಳುವಾಗ .... ಯಾಂತ್ರಿಕ ಬದುಕಿನ ಬವಣೆಗಳಿಂದ ಮುಕ್ತವಾಗಿ ಸಾರ್ಥಕವಾಗಿ ಕಳೆದ ಒಂದು ದಿನ ... ಎನ್ನುವ ಭಾವನೆ ಇತ್ತು.....

just chill..

Tuesday, April 10, 2007

ಇತಿಹಾಸ ಪುಟಕ್ಕೆ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಲೋಕದ ಖ್ಯಾತ ಹಾಗೂ ಆಧುನಿಕ ಬರಹಗಾರ, ವಿಮರ್ಷಕ, ಕೃಷಿಕ,ಸಂಶೋಧಕ,ಪರಿಸರ ಪ್ರೇಮಿ,ಉತ್ತಮ ಛಾಯಾಗ್ರಾಹಕ ....
ಸರಳ ಮತ್ತು ಮನಮುಟ್ಟುವ ಬರವಣಿಗೆ ಅವರ ವೈಶಿಷ್ಟ್ಯ. ತಬರನ ಕಥೆ, ಕರ್ವಾಲೊ,ಚಿದಂಬರ ರಹಸ್ಯ, ಪರಿಸರದ ಕತೆಗಳು, ಅಬಚೂರಿನ ಪೋಸ್ಟ್ ಆಫೀಸು, ನರಭಕ್ಷಕ,ಕಿರಗೂರಿನ ಗಯ್ಯಾಳಿಗಳು, ನಿಘೂಡ ಮನುಷ್ಯರು... ಮುಂತಾದ ಕೃತಿಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚೊತ್ತಿದ್ದಾರೆ. ಮಲೆನಾಡಿನ ಸುಂದರ ಚಿತ್ರಣ ಅವರ ಕೃತಿಯುದ್ದಕ್ಕೂ ಬಿಂಬಿತವಾಗುತ್ತೆ.
ಅವರ ಅಗಲಿಕೆ.. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ತುಂಬಲಾರದ ನಷ್ಟ.’ಮಾಯಾಲೋಕ’ದ ಕೃತಿಗಾರನಿಗೆ..ಇದೋ ಒಂದು ಅಂತಿಮ ನಮನ...

Wednesday, March 21, 2007

ಮರುಭೂಮಿಯಲ್ಲೊಂದು ಓಯಾಸಿಸ್.....

ತುಂಬಾ ದಿನ ಆಯ್ತು ಈ ಶೀರ್ಷಿಕೆ ಬರದು.... ಮುಂದೆ ಬರೆಯಲಾಗಿರಲಿಲ್ಲ........
ಮರುಭೂಮಿಯಲ್ಲಿ ನಡೆಯುತ್ತಿರುವ ಅನುಭವ.. ಬಹು ದೂರ ನಡೆದುಬಂದ ಹಾಗೆ.. ಆದರೂ ಮುಂದೆ ಹೋಗುವ ಹೆಬ್ಬಯಕೆ...ತಣ್ಣೀರಿನ ಹಿತ ಸಿಂಚನದಿಂದ ಮುಂದಿನ ಪ್ರಯಾಣ ಸುಖವಾಗಿರುವದೆನೋ ಎನ್ನುವ ಸಣ್ಣ ಆಸೆ ಮನದಲ್ಲಿ...ಓಯಾಸಿಸ್ ಹುಡುಕುವ ತವಕ...ಆದರೆ ಸದ್ಯಕ್ಕಂತೂ.... ಓಯಾಸಿಸ್ ...ಮರೀಚಿಕೆ ಯಾಗಿದೆ... ಕೈಗೆಟಕುವದು ಯಾವಾಗ...???
ಕಾದು ನೋಡಬೇಕಿದೆ.

Friday, March 16, 2007

ಯುಗಯುಗಾದಿ ಕಳೆದರು .......

ಯುಗಯುಗಾದಿ ಕಳೆದರು .......ಯುಗಾದಿ ಮರಳಿ ಬರುತಿದೆ.. ದ.ರಾ.ಬೇಂದ್ರೆಯವರಿಂದ ರಚಿತಗೊಂಡ ಹಾಡನ್ನು ಮತ್ತೆ ಗುನುಗುತ್ತಿದ್ದಾರೆ.ಕಾರಣವೇನೆಂದರೆ.. ಯುಗಾದಿ ಮತ್ರೆ ಬರುತಿದೆ ... ಇನ್ನೆರಡು ದಿನದಲ್ಲಿ. ಕಾಲ ಗರ್ಭದಲ್ಲಿ ಮತ್ತೊಂದು ಸಂವತ್ಸರ ಲೀನವಾಗಿದೆ. ಹೊಸ ಆಸೆ ಕನಸುಗಳನು ಹೊತ್ತ ಹೊಸ ವರುಷ ನವೋಲ್ಲಾಸ, ಸಂಭ್ರಮದೊಂದಿಗೆ ಕಾಲಿರಿಸುತಿದೆ. ಭೂ ಮಾತೆಯೂ ಮೈಗೊಡವಿ ನಿಂತಂತೆ ಮರ ಗಿಡಗಳಲ್ಲಿನ ಹಣ್ಣೆಲೆ ಉದುರಿಸಿ ಹಸನಾದ ಚಿಗುರೆಲೆಗಳಿಂದ ಪ್ರಕೃತಿಯನ್ನು ಸಿಂಗರಿಸಿ ’ನವ ವಧು’ವಿನಂತೆ ಅಲಂಕೃತಗೊಂಡು ನೂತನ ವರ್ಷವನ್ನು ಸ್ವಾಗತಿಸುತ್ತಿದ್ದಾಳೆ.ಕಡು ಬೇಸಿಗೆಯಲ್ಲೂ ಪ್ರಕೃತಿಯಲ್ಲಿ ಕಣ್ಮನ ತಣಿಸುವ ಹಸಿರು ತುಂಬುವದು ಈ ಯುಗಾದಿಯ ಆರಂಭದಿಂದ. ಹೊಸ ಸಂವತ್ಸರವಾದ ’ಸರ್ವಜಿತ’ ಸರ್ವರಿಗೂ ಶುಭ ತರಲಿ.

"wish you happy Yugadi'

Monday, March 12, 2007

’ವಿಶ್ವ ಕಪ್ ಕ್ರಿಕೆಟ್’ ಯೆಂಬ ಮಹಾ ಸಮರ'

vishwadaadyaMta krikeT priyarannu soojigallinaMte seLeyuva 'vishwakap' yeMba mahasamarakke iMdu beLagina jaava bhaarateeya kaalamaana 3.30 kke chaalane doretide.I varN raMjita samaaraMbha naDedaddu kerebiyan dveepalli.46 dinagaLa kaala yellara gamana ee kadanada kurukshEtravaada vesT iMDees mEle.16 taMDagaLu tamma balaa bala mereyalive.namma bhaarata paMgaDavoo idaralli bhaagavahisuttiruvadu hemmeya viShaya. spardhaatmaka kreeDaa manObhaavane maatravalla dEshaprEmavoo biMbita goLLaliruva ee spardheyalli namma bhaarateeya taMDa uttama pradarshana neeDaliyeMdu shubha haaraisONa.

Wednesday, February 28, 2007

ಕುಣಿದು ಕುಣಿದು ಬಾರೇ..ಒಲಿದು ಒಲಿದು ಬಾರೇ..

sadyadalli suddi maadiruva "muMgaaru maLe"ya tuNuku....

ಸಿನಮೀಯವಾದ ಒಂದು ಪ್ರೇಮಕತೆ ..... ಮುಂಗಾರು ಮಳೆ ಚಿತ್ರದ ಕಥಾ ವಸ್ತು... ಆದ್ರೂ ಏನೋ ಚನ್ನಾಗಿದೆ. ’ಪ್ರೀತಿ’ಗೆ... ಜಗತ್ತೆಲ್ಲಾ ಸುಂದರವಾಗಿ ಕಾಣಿಸುತ್ತದೆ. ಚಿತ್ರದಲ್ಲಿ ಬರುವ ಹಸಿರು, ಗಾಳಿ, ಮಳೆ ...ಚಿತ್ರಣ... ಪ್ರೀತಿಯ ಜಗತ್ತನ್ನೇ ತೋರಿಸುತ್ತೆ... ಮಳೆ ಇಲ್ಲಿ ... ಪ್ರೇಮವಾಗಿ ಹುಟ್ಟುತ್ತೆ, ಕತೆ, ಕವನ, ಹಾಸ್ಯ, ಲಾಸ್ಯ,ತ್ಯಾಗ, ನಂಬಿಕೆ, ಕಣ್ಣೀರು, ದುರಂತ ಪ್ರೇಮ ಕತೆಗೆ ಸಾಕ್ಷಿ...ಆಗುತ್ತೆ..

Tuesday, January 30, 2007

Modala Hejje

ಏನನ್ನಾದರು ಬರೆಯೋಣ ಅನ್ನಿಸ್ತಾ ಇತ್ತು ಮನಸ್ಸಿಗೆ... ’ಬ್ಲಾಗ್ ಸ್ಪೌಟ್’ ನಲ್ಲಿ ಅದಕ್ಕೆ ಒಂದು ಅವಕಾಶ ಸಿಕ್ತು..
ಬರೆಯಬೇಕು ಯೆಂದು ಮನಸ್ಸಿಗೆ ಅನ್ನಿಸುವದು ಹತ್ತು ಹಲವು...
ಶಬ್ದವಾಗಿ ರೂಪಗೊಳ್ಳುವವು ಹಲವು...
ಬರವಣಿಗೆಯಾಗಿ ಅಚ್ಚೊತ್ತುವವು ಕೆಲವೇ ಕೆಲವು.